ಹಿಂದೆ....
"ಯಾಕೆ ಅವಳಿಗೆ ಆ ತರ ಮಾಡುತ್ತೀಯಾ? ಪಾಪ. ಎಂದು ನನಗೇ ಬೈಯುತ್ತಾಳೆ. ನನಗೂ ಇದೆಲ್ಲ ಹೊಸದು"...ಮುಂದಕ್ಕೆ...
ಸಂಬಂಧಗಳನ್ನು ಸಂಭಾಳಿಸುವುದು ತುಂಬಾ ಕಷ್ಟವಪ್ಪ.. ಅಪ್ಪ ಅಮ್ಮ, ಅಣ್ಣ, ಅಕ್ಕ, ಅಜ್ಜಿ ಅಜ್ಜ..ಗೆಳೆಯ, ಗೆಳತಿ.. ಹೀಗೆ ಮಾನವ ಸಂಬಂಧಗಳಿಗೆ ಹೆಸರನ್ನು ನೀಡಿ, ಚೌಕಟ್ಟು ಮಾಡಿದ್ದರೂ ಮಾನವ ಸಂಬಂಧಗಳ ಉದ್ದ ಅಗಲಗಳನ್ನು ಅಳೆಯುವುದು ಅಸಾಧ್ಯ.
ಇತ್ತೀಚೆಗೆ ಭಾರತಿ ಏನಾದರೂ ಹಾಗೆ ಹೀಗೆ ಎಂದು ತನ್ನ ಪರ್ಸನಲ್ ವಿಷಯಗಳನ್ನು ಚರ್ಚೆ ಮಾಡಲು ಬಂದರೆ ಸಿಡುಕುತ್ತೇನೆ. ಸಾಕಪ್ಪಾ ಅವಳ ಸಹವಾಸ ಎನಿಸಿಬಿಟ್ಟಿದೆ. ಹೇಗಾದರೂ ಅವಳ ಕೈಯಿಂದ ತಪ್ಪಿಸಿಕೊಂಡರೆ ಸಾಕು ಎಂದೆನಿಸುತ್ತದೆ. ಕುಮ್ಮಿ, ಭಾರತಿ ಇಬ್ಬರೂ ನನಗೆ ಗೆಳತಿಯರೇ.. ಆದರೆ ಎಷ್ಟು ವ್ಯತ್ಯಾಸ. ನಾನು ಆ ಗೆಳೆತನವನ್ನು ನಿಭಾಯಿಸುವುದರಲ್ಲಿ ಅಜಗಜಾಂತರ.
ನಾನೂ ಬಹಳಷ್ಟು ಸಾರಿ ವಿಚಾರ ಮಾಡಿದ್ದೇನೆ.. ಭಾರತಿಯ ಗೆಳೆತನ ಯಾಕೆ ಉಸಿರುಕಟ್ಟಿಸುತ್ತದೆ ಎಂದು .. ಕುಮ್ಮಿ ಪ್ರತಿಯೊಂದಕ್ಕೂ ನನ್ನನ್ನು ಎದುರು ನೋಡುತ್ತ ಕುಳಿತುಕೊಳ್ಳುವುದಿಲ್ಲ. ಗೆಳತಿಯೆಂದು ನನ್ನನ್ನು ಬಹಳ ಹಚ್ಚಿಕೊಂಡರೂ ಯಾವುದಕ್ಕೂ ನನ್ನ ಮೇಲೆ ಡಿಪೆಂಡಾಗಿಲ್ಲ. ನಾನು ಅನ್ಯಾಯವಾಗಿ ಅವಳ ಮೇಲೆ ರೇಗಿದರೂ ತಪ್ಪೆಣಿಸುವುದಿಲ್ಲ. ಸ್ವಲ್ಪ ಹೊತ್ತಿಗೇ ನಾವಿಬ್ಬರೂ ಒಂದು. ಆದರೆ ಕುಮ್ಮಿ ಜೊತೆ ಒಂದು ತರಹ ಸ್ವಾತಂತ್ರ್ಯ ಅನುಭವಿಸುತ್ತೇನೆ.
ಆದರೆ ಭಾರತಿ ವಿಷಯದಲ್ಲಿ ಹಾಗಾಗುವುದೇ ಇಲ್ಲ. ಅಪ್ಪಿತಪ್ಪಿ ನಾನವಳ ಮೇಲೆ ರೇಗಿದರೆ ಮುಗಿದೇ ಹೋಯಿತು. ಒಂದು ನಾಲ್ಕು ದಿನ ಅದನ್ನೇ ಮನಸ್ಸಿನಲ್ಲಿರಿಸಿ ಕೊಳ್ಳುತ್ತಾಳೆ. ನನ್ನ ಪ್ರತಿ ಮಾತಿಗೂ ಅದರ ಹಿಂದಿನ ಅರ್ಥವನ್ನು ಹುಡುಕುತ್ತಾ ಹೊರಡುತ್ತಾಳೆ. ನೀನ್ಯಾಕೆ ಹೀಗೆ ಮಾಡಿದೆ, ಹಾಗೆ ಯಾಕೆ ಹೇಳಿದೆ ಎಂದು ಪ್ರಶ್ನೆಗಳಿಂದ ತಿವಿಯುತ್ತಾಳೆ... ಅಯ್ಯೋ, ಅವಳ ಜೊತೆ ಇರುವುದೊಂದು ದೊಡ್ಡ ಟಾರ್ಚರ್...
ಇದರಲ್ಲಿ ಅವಳ ತಪ್ಪೇನೂ ಇಲ್ಲ. ಆದರೆ ನನ್ನಿಂದ ಅವಳನ್ನು ಸಹಿಸಲೂ ಸಾಧ್ಯವಿಲ್ಲ. ಅವಳ ಜೊತೆ ಹೇಗೆ ಇರಬೇಕು, ಹೇಗೆ ಮಾತಾಡಬೇಕು ಎಂದೇ ಅರ್ಥವಾಗುವುದಿಲ್ಲ. ನನ್ನ ಯಾವ ಮಾತನ್ನು ಹೇಗೆ ಅರ್ಥೈಸಿಕೊಳ್ಳುತ್ತಾಳೋ, ಯಾವಾಗ ಅಳುತ್ತಾಳೋ... ಅವಳ ಜೊತೆ ಇರುವಷ್ಟು ಹೊತ್ತೂ ಒಂದು ತರಹ ಭಯದಲ್ಲೇ ಕಳೆಯುತ್ತೇನೆ..
ಭಾರತಿಗೆ ನನ್ನ ಈ ಭಾವನೆ ಅರ್ಥವಾಗುತ್ತಿಲ್ಲವೆ? ಖಂಡಿತ ಗೊತ್ತು. ಆದರೆ ಅದನ್ನು ಒಪ್ಪಿಕೊಳ್ಳಲು ಅವಳೇ ಸಿದ್ಧಳಿಲ್ಲ. ಪದೇ ಪದೇ ವಿವಿಧ ಪ್ರಶ್ನೆಗಳನ್ನು ಹಾಕಿ ನಾನು ಅವಳನ್ನು ನೆಗ್ಲೆಕ್ಟ್ ಮಾಡುತ್ತಿದ್ದೇನೆ ಎನ್ನುವುದನ್ನು ಕನ್‌ಫರ್ಮ್ ಮಾಡಿಕೊಳ್ಳುತ್ತಾಳೆ. ಭಾರತಿ ಗೆಳೆತನದಿಂದ ಸ್ವಲ್ಪ ಕಸಿವಿಸಿ ಉಂಡಿದ್ದರೂ, ಅದರಿಂದ ನಾನು
ಕಲಿತದ್ದು ಮಾತ್ರ ಬಹಳ.
ಯಾವುದೇ ಸಂಬಂಧವಿರಲಿ ಒಂದು ಮಿತಿ ಇದ್ದರೇ ಸುಂದರವಾಗಿರುತ್ತದೆ. ಹೌದು, ಪ್ರೀತಿಗೆ ಯಾವುದೇ ಗಡಿ, ಮಿತಿ ಇಲ್ಲ. ಆದರೆ ಅಂತ ಪ್ರೀತಿಯಂತಹ ಪ್ರೀತಿಯೂ ಅತಿಯಾದರೆ ವಿಷವಾಗುತ್ತದೆ, ಉಸಿರುಗಟ್ಟಿಸುತ್ತದೆ. ಯಂಡಮೂರಿ ಹೇಳುವಂತೆ 'ಪ್ರೀತಿ ಎಂದರೆ ನಮ್ಮ ಇಷ್ಟಗಳನ್ನು ಬಲಿಕೊಡುವುದಲ್ಲ. ನಮ್ಮ ಇಷ್ಟಗಳೊಂದಿಗೆ ಅವರ ಇಷ್ಟಗಳನ್ನೂ ಗೌರವಿಸುವುದೇ ಪ್ರೀತಿ'. ತನ್ನತನವನ್ನು ತೊರೆದು ಪ್ರೀತಿಸಿದರೆ ಖಂಡಿತ ಅದೊಂದು 'ಗ್ರೇಟ್' ಅಲ್ಲ.
ಅರಳಿಸುವುದೇ ಪ್ರೀತಿ, ಗೆಳೆತನ. ಸ್ನೇಹದ ಸಲುಗೆಯನ್ನು 'ಟೇಕನ್ ಫಾರ್ ಗ್ರ್ಯಾಂಟೆಡ್' ಎಂದುಕೊಂಡರೆ ತೊಂದರೆ ಗ್ಯಾರಂಟಿ. ಗೆಳೆತನದಲ್ಲಿ ಪರಸ್ಪರ ಸಮಾನ ಪ್ರೀತಿ ಇದ್ದರೆ ಸರಿ, ಸ್ವಲ್ಪ ಹೆಚ್ಚು ಕಡಿಮೆ ಆಯಿತು ಎಂದರೂ, ಹರಿದು ಹೋಗುವ ನಾಜೂಕು ಎಳೆ ಗೆಳೆತನ...-ಸುಮಿ
ಹದಿನಾರರ ಹರೆಯದ ಸುಮ ಕೋಮಲ ಮನಸ್ಸಿನ ಮಲೆನಾಡಿನ ಕುವರಿ.
Friday, March 4, 2011
Friday, December 24, 2010
ಮಾನಸಿಕ ಅವಲಂಬನೆ
ಭಾರತಿ... ನಿಜಕ್ಕೂ ಅವಳು ಅವಳ ರೂಪದಂತೆ ಸುಂದರ ಮನಸಿನ ಹುಡುಗಿ. ಪ್ರಭಾವಿ ಶ್ರೀಮಂತರ ಮನೆಯ ಒಬ್ಬಳೇ ಮಗಳು. ಸ್ವಲ್ಪವೂ ಸೊಕ್ಕಿಲ್ಲ. ಶಾಂತ ಸ್ವಭಾವ. ಅನವಶ್ಯಕವಾಗಿ ಯಾರನ್ನೂ ಜರೆದವಳಲ್ಲ. ಆದರೆ ಒದಿಬ್ಬರನ್ನು ಬಿಟ್ಟರೆ ಮತ್ತ್ಯಾರ ಜೊತೆಗೂ ಬೆರೆಯುವುದಿಲ್ಲ. ಉಳಿದ ಹುಡುಗಿಯರು ಅವಳನ್ನು ಒಬ್ಬ ವಿಐಪಿ ಎಂದು ಪರಿಗಣಿಸಿ ದೂರವೆ ಇರಿಸಿಬಿಟ್ಟಿದ್ದರು. ಮಾತಾನಾಡುವಾಗಲೂ ಅಷ್ಟೆ, ಅಳೆದು ತೂಗಿ ಮಿತಿ ಮೀರದ ಮಾತುಗಳು. ಅಭ್ಯಾಸದಲ್ಲೂ
ಮುಂದು.
ನಾನು ಕಾಲೇಜಿಗೆ ಸೇರಿದ ಹೊಸದರಲ್ಲಿ ಅವಳಿಗೆ ನಾನು ಜೋರಾಗಿ ನಗುವುದು, ಗೆಳತಿಯರೊಂದಿಗೆ ಸೇರಿ ಕ್ಲಾಸಿನಲ್ಲಿ ಗಲಾಟೆ ಮಾಡುವುದು ಎಲ್ಲ ಸಹ್ಯವಾಗುತ್ತಿರಲಿಲ್ಲ. ಆದರೆ ಸುಮಾರು ಮೂರು ತಿಂಗಳ ಹಿಂದೆ, ಮಧ್ಯಾಹ್ನದ ಬ್ರೇಕ್ ಟೈಮಿನಲ್ಲಿ ಭಾರತಿ ಬಹಳ ಸಪ್ಪೆ ಮೋರೆ ಮಾಡಿಕೊಂಡು ಅವಳಷ್ಟಕ್ಕೆ ಅವಳು ಮೂಲೆ ಬೆಂಚು ಏರಿ ಕುಳಿತಿದ್ದಳು. ಭಾರತಿಗೆ ಮನೆಯಲ್ಲಿ ಅಪ್ಪ ಅಮ್ಮನ ಜೊತೆ ಅಷ್ಟು ಸಲುಗೆಯಿರಲಿಲ್ಲ. ಒಡನಾಡಲು ಜೊತೆಗೆ ಹುಟ್ಟಿದವರಾರೂ ಇಲ್ಲ. ಹೇಳಿಕೊಳ್ಳುವಂತಹ ಆಪ್ತ ಸ್ನೇಹಿತರೂ ಇಲ್ಲ. ಯಾಕೋ.. ನನಗೆ ಅವಳನ್ನು ನೋಡಿ ಪಾಪ ಎನ್ನಿಸಿತು. "ಏನಾಯ್ತೆ ಭಾರತಿ ಎಂದು ಆಪ್ತತೆಯಿಂದ ಕೇಳುತ್ತ ಪಕ್ಕದಲ್ಲಿ ಹೋಗಿ ಕುಳಿತೆ.
ನಮಗೆ ಅಂತಹ ಬಾಂಧವ್ಯವೇನೂ ಇರಲಿಲ್ಲ. ಆದರೆ ಅವಳಿಗೆ ಆ ಸಮಯಕ್ಕೆ ಹೇಳಿಕೊಳ್ಳಲು ಯಾರಾದರೂ ಬೇಕಾಗಿತ್ತೇನೋ.. ಅಳುತ್ತ ಅವಳ ಮನೆ ಬಗ್ಗೆ, ತನ್ನ ಒಂಟಿತನದ ಬಗ್ಗೆ ಹೇಳಿಕೊಂಡಳು, " ನೋಡು ಭಾರತಿ, ಅಪ್ಪ-ಅಮ್ಮನಿಗೆ ನಿನ್ನ ಜೊತೆ ಕಳೆಯಲು ಟೈಮೇ ಇಲ್ಲ ಎಂದು ಕೊರಗುತ್ತೀಯಾ. ಆದರೆ ನೋಡು, ನಮ್ಮ ಕ್ಲಾಸಿನ ಶ್ವೇತಾಗೆ ಅಪ್ಪ ಅಮ್ಮನೇ ಇಲ್ಲ ಹೀಗೆ ನನಗೆ ತೋಚಿದಂತೆ ಸಮಾಧಾನ ಮಾಡಿದೆ.
ಈ ಘಟನೆ ನಡೆದ ಮೇಲೆ ತೀರ ಎನ್ನುವಷ್ಟು ನನ್ನನ್ನು ಹಚ್ಚಿಕೊಂಡಳು. ಎಲ್ಲದಕ್ಕೂ ನನ್ನ ಸಲಹೆ ಕೇಳುತ್ತಾಳೆ. ಸ್ವಲ್ಪ ಬ್ರೇಕ್ ಸಿಕ್ಕರೂ ಸಾಕು. ಪಕ್ಕದಲ್ಲಿ ಬಂದು ಕುಳಿತುಬಿಡುತ್ತಾಳೆ.
ಬಹಳ ಆಶ್ಚರ್ಯವಾಗುತ್ತದೆ. ಒಂದು ಚಿಕ್ಕ ಸಮಾಧಾನ ಇಷ್ಟೆಲ್ಲ ಮಾಡುತ್ತದೆಯಾ?! ಇದೇನೆ ಇದ್ದರೂ ಭಾರತಿಯ ಅತಿಯಾದ ಅವಲಂಬನೆ ನನಗೆ ಒಂಥರಾ ಉಸಿರು ಕಟ್ಟಿಸುತ್ತದೆ. ಚಿಕ್ಕಪುಟ್ಟ, ಅತೀ ಪರ್ಸನಲ್ ವಿಷ್ಯಗಳಿಗೆ ನನ್ನ ಸಲಹೆ ಬೇಕು ಎನ್ನುವ ಅವಳ ರೀತಿ ಮುಜುಗರ ಉಂಟುಮಾಡುತ್ತದೆ. ಯಾವುದೇ ಕಾರಣಕ್ಕೂ ಅವಳು ನನ್ನನ್ನು ವಿಮರ್ಶೆ ಮಾಡುವುದೇ ಇಲ್ಲ. ನಾನು ಹೇಳಿದ್ದೆಲ್ಲ ವೇದವಾಕ್ಯಎಂಬಂತೆ ಆಡುತ್ತಾಳೆ. ಇದೆಲ್ಲ ನನಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ.
ಇದನ್ನೆ ನೇರವಾಗಿ ಹೇಳಿದರೆ "ನೀನು ನನ್ನ ಬಿಟ್ಟು ಹೋಗುತ್ತೀಯಾ" ಅಂತ ಅಳುತ್ತಾಳೆ. ಈಗೀಗಂತೂ ಅವಳು ಬಂದಳು ಎಂದರೆ ಎಲ್ಲಾದರೂ ಹೋಗಿ ಅಡಗಿಕೊಳ್ಳಬೇಕು ಎನಿಸುತ್ತದೆ. ಉದ್ದೇಶಪೂರ್ವಕವಾಗಿ ಅವಳಕಣ್ಣುತಪ್ಪಿಸಿದರೆ "ನನ್ನನ್ನು ಅವಾಯ್ಡ್ ಮಾಡುತ್ತೀಯಾ" ಎಂದು ಬೇಸರಿಸಿಕೊಳ್ಳುತ್ತಾಳೆ.
ಖಂಡಿತವಾಗಿಯೂ ಅವಳಿಗೆ ಬೇಜಾರು ಮಾಡಲು ನನಗೆ ಇಷ್ಟವಿಲ್ಲ. ಆದರೆ ಅವಳನ್ನು ಸಹಿಸಿಕೊಳ್ಳುವುದೂ ಕಷ್ಟ. ಹಾಗಾದರೆ ಅವಳ ಈ ಡಿಪೆಂಡೆನ್ಸಿ ತಪ್ಪಾ? ಅಥವಾ ಅವಳನ್ನು ಸಹಿಸಿಕೊಳ್ಳಲಾಗದಿರುವುದು ನನ್ನದೇ ತಪ್ಪಾ?
ಕುಮ್ಮಿ ನಾನು ಒಳ್ಳೆಯ ಗೆಳತಿಯರು. ಪರ್ಸನಲ್ ವಿಷ್ಯಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ಯಾವತ್ತೂ ನನಗೆ ಅವಳು 'ಭಾರ' ಅನ್ನಿಸಿದ್ದೇ ಇಲ್ಲ. ಆದರೆ ಭಾರತಿ ವಿಷಯದಲ್ಲಿ ಮಾತ್ರ ಯಾಕೆ ಹೀಗನಿಸುತ್ತದೆ?
ಕುಮ್ಮಿ ಕೆಲವೊಮ್ಮೆ ಕೇಳುತ್ತಾಳೆ, "ಯಾಕೆ ಅವಳಿಗೆ ಆ ತರ ಮಾಡುತ್ತೀಯಾ? ಪಾಪ." ಎಂದು ನನಗೇ ಬೈಯುತ್ತಾಳೆ. ನನಗೂ ಇದೆಲ್ಲ ಹೊಸದು...

Saturday, November 20, 2010
ಇವತ್ತು ಒಂದು ಹಿಂದಿ ವಾಕ್ಯ ಓದಿದೆ.
'ಅಗರ್ ತುಮ್ಹೆ ಪ್ಯಾರ್ ಕರ್‌ನೆ ಕೇ ಲಿಯೆ ವಕ್ತ್ ಕಮ್ ಪಡತೆ ಹೈ ತೊ, ಉಸೆ ನಫರತ್ ಕರನೆ ಮೆ ಕ್ಯೂ ಬರ್‌ಬಾದ್ ಕರ್‌ತೆ ಹೊ?' (ನಿನಗೆ ಪ್ರೀತಿ ಮಾಡಲು ಸಮಯವೇ ಇಲ್ಲವೆಂದಾದರೆ, ಅದನ್ನು ದ್ವೇಷ ಮಾಡಲು ಯಾಕೆ ಹಾಳು ಮಾಡುತ್ತೀಯಾ?) ಓದಿದಾಗಲಿಂದ ಯಾಕೋ ಬಹಳ ನನ್ನನ್ನು ಕಾಡುತ್ತಿದೆ..
ಬಹುಶಃ ಮುಂದೊಂದು ದಿನ ಈ ಡೈರಿಯನ್ನು ತೆರೆದು ಓದಿದರೆ ಮನುಷ್ಯರ ವಿರುದ್ಧ ದೂರಿನ ಒಂದು ದೊಡ್ಡ ಪಟ್ಟಿಯಂತೆ ಇರುತ್ತದೆಯೆನೋ! ಅಷ್ಟು ವಕ್ರಗಳನ್ನು ಕಾಣುತ್ತಿದ್ದೇನೆ ಈ ಮಾನವರಲ್ಲಿ. ಮನದಲ್ಲಿ ದಯೆ, ಪ್ರೀತಿ, ಮಮತೆಗಳಂತಹ ಉನ್ನತ ಗುಣಗಳನ್ನು ಸೃಷ್ಟಿಸಿದ ದೇವರು ಈ ಅಸೂಯೆ, ದ್ವೇಷ, ಹಿಂಸೆ, ಸ್ವಾರ್ಥಗಳನ್ನು ಏಕೆ ಇರಿಸಿದನೋ...
ದ್ವೇಷ ಅಸೂಯೆಗಳೂ ಒಮ್ಮೊಮ್ಮೆ ಒಳ್ಳೆಯದೇನೋ, ಆದರೆ ಇವುಗಳೇ ಉತ್ತಮ ಗುಣಗಳನ್ನು ನುಂಗಿ ಹಾಕುತ್ತವಲ್ಲ? ಇದು ಯಾಕೆ? ಪ್ರೀತಿ ಮಾಡಲು ಯಾರಿಗೂ ಸಮಯವಿಲ್ಲ. ಅದೇ ಏನಾದ್ರೂ ಜಗಳ, ದ್ವೇಷ ಮಾಡುವುದಿದ್ದರೆ ಎಲ್ಲರೂ ಒಂದಾಗಿಬಿಡುತ್ತಾರೆ! ಏನು ಕೂಗಾಟ, ಏನು ಪ್ರತಿಭಟನೆ...
ಇತಿಹಾಸ, ಮತ, ತತ್ವ, ಧರ್ಮ ಎಲ್ಲದರಲ್ಲೂ ಗೊಂದಲ. ದೇವರಿದ್ದಾನೆಯೋ ಇಲ್ಲವೋ, ನಂಬಿಕೆ ದೊಡ್ಡದೋ-ವಿಜ್ಞಾನವೋ, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇರಬೇಕೋ-ರಾಮ ಮಂದಿರವಿರಬೇಕೋ,ಬಸವಣ್ಣ ಯಾವ ಜಾತಿಯವನು, ಟಿಪ್ಪು ದೇಶಪ್ರೇಮಿಯೋ-ದ್ರೋಹಿಯೋ, ಮೊಘಲರು ಹಿಂದೂ ದೇವಾಲಯಗಳನ್ನು ಒಡೆದರೋ- ಇಲ್ಲವೊ..
ಯಾವನೋ ಒಬ್ಬ ಬುದ್ಧಿಜೀವಿ ಅನ್ನಿಸಿ(ಅಂದು)ಕೊಂಡವನು ತನ್ನ ವಿಚಾರ ಮಂಡಿಸುತ್ತಾನೆ. ಅವನದೊಂದು ಪಂಗಡ. ಅವನ ವಿರುದ್ಧ ವಿಚಾರದವನದೊಂದು ಪಂಗಡ. ಎಲ್ಲರಿಗೂ ತಮ್ಮ ವಾದವೇ ಸರಿ, ಕೊನೆ. ಅವರವರ ದೃಷ್ಟಿಯಲ್ಲಿ ಅವರವರ ವಿಚಾರ ಸರಿ. ಆದರೆ ಅದನ್ನು ಎಲ್ಲರೂ ಒಪ್ಪಲೇಬೇಕು ಎನ್ನುವ ಮನೋಭಾವ ಯಾಕೆ? ನಾನ್‌ಸೆನ್ಸ್!! ಯಾರ ಉದ್ಧಾರಕ್ಕಾಗಿ ಇವೆಲ್ಲ? ಈ ವಾದಗಳು ಹೊಟ್ಟೆತುಂಬಿಸುತ್ತವಾ? ಒಂದು ವೇಳೆ ದೇವರಿದ್ದಾನೆ ಎಂದು ಎಲ್ಲರೂ ಒಪ್ಪಿಕೊಂಡರೆ ದೇವರು ಬಂದು ಈ ಬಡತನ-ಕಷ್ಟಗಳನ್ನು ದೂರ ಮಾಡಿಬಿಡುತ್ತಾನಾ? ನಂಬಿಕೆಯೇ ದೊಡ್ಡದೆಂದು ಸಾಬೀತಾದರೆ ವಿಜ್ಞಾನದ ಬೆಳವಣಿಗೆ ನಿಂತು ಬಿಡುತ್ತದೆಯೆ?
ಬಸವಣ್ಣ ಕೆಳ ವರ್ಗದವನು ಎನ್ನುವುದೇ ಸತ್ಯವಾದರೆ ಅವನ ವಿಚಾರಗಳೂ ಕೀಳಾಗಿಬಿಡುತ್ತದೆಯೆ? ಮೊಘಲರು ಹಿಂದೂ ದೇವಾಲಯಗಳನ್ನು ಕೆಡವಿದ್ದುಹೌದಾದರೆ ಮೊಘಲರು ಮತ್ತೆ ಬಂದು ಆ ದೇವಾಲಯಗಳನ್ನು ಕಟ್ಟಿಕೊಡಲು ಸಾಧ್ಯವೇ? ಅಯೋಧ್ಯೆಯಲ್ಲಿ ಮಸೀದಿ ಮಂದಿರ ಎರಡನ್ನೂ ಕಟ್ಟಲು ಸಾಧ್ಯವಿಲ್ಲವೆ. ಬಸವಣ್ಣನ ಜಾತಿಯಾವುದಾದರೇನು ಅವರ ಉನ್ನತ ವಿಚಾರಗಳನ್ನು ಜಾತಿ ಮಂಕು ಮಾಡಲು ಸಾಧ್ಯವಿಲ್ಲ. ಯಾರು ಕೆಡವಿದರು ಯಾರು ಕಟ್ಟಿದರು ಎಂದು ಚರ್ಚಿಸುವುದಕ್ಕಿಂತ ನಮ್ಮ ಶ್ರೇಷ್ಠ ಸಂಸ್ಕೃತಿ ವಿಚಾರಗಳನ್ನು ಉಳಿಸಿ ಬೆಳೆಸಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು.
ಯಾರೂ ದ್ವೇಷವನ್ನು ಬಯಸುವುದಿಲ್ಲ. ಎಲ್ಲರಿಗೂ ಪ್ರೀತಿ, ಶಾಂತಿ ಬೇಕು. ಆದರೆ ಕೇವಲ ’ಬೇಕು ಎಂದರೆ ಆಯಿತೆ, ತನ್ನಿಂದಲೂ ಅದನ್ನು ಬೇರೆಯವರು ಬಯಸುತ್ತಾರೆಎನ್ನುವುದನ್ನು ಮರೆತುಬಿಡುತ್ತಾರೆ... ಹೌದು, ನಾನು ಇನ್ನೂ ಪ್ರಪಂಚವನ್ನು ಸರಿಯಾಗಿ ನೋಡಿಲ್ಲ. ಜೀವನಕ್ಕೆ ನೇರ ಮುಖಾಮುಖಿಯಾಗಿಲ್ಲ. ಚಿಂತನೆ ನಡೆಸುವಷ್ಟು ಅನುಭವಿಯೂ ನಾನಲ್ಲ. ಪರಿಸ್ಥಿತಿಗಳು ನನ್ನನ್ನು ಬದಲಿಸಬಹುದು. ಆದರೆ ಈ ಕ್ಷಣಕ್ಕೆ ನನಗೆ ಇದೇ ಸತ್ಯ, ಈ ವಿಚಾರವೇ ಸರಿ. ಖಂಡಿತ ಈ ವಿಚಾರಗಳನ್ನು ಯಾರೂ ಒಪ್ಪಬೇಕಾಗಿಲ್ಲ.

Saturday, October 2, 2010
ಸ್ವಾತಂತ್ರ್ಯ ಎಂದರೆ..?
ಪ್ರೈಮರಿ ಸ್ಕೂಲಿಗೆ ಹೋಗುವಾಗ ಹೋಮ್‌ವರ್ಕ್ ಭಾರದಿಂದ ಬಸವಳಿದು ಹೋಗುತ್ತಿದ್ದೆ. ಬೆಳಗಿನಿಂದ ಸಂಜೆಯವರೆಗೆ ನಾಲ್ಕು ಗೋಡೆಯ ನಡುವೆ ಕೂರಿಸಿಕೊಂಡು, ಹೊಡೆದು, ಬಡಿದು ತಲೆಗೆ ತುಂಬುವುದಲ್ಲದೇ ಕೈ ನೋವು ಬರುವ? ಬರೆಯಲು ಬೇರೆ ಕೊಡುತ್ತಿದ್ದರು. ಬರೆಯದಿದ್ದರೆ ಅದಕ್ಕೆ ಶಿಕ್ಷೆ ಬೇರೆ. ಯಾವಾಗ ಈ ಹಿಂಸೆ ಮುಗಿಯುತ್ತದೋ ಅನಿಸುತ್ತಿತ್ತು.
ಯಾವಾಗಲೂ ಅಪ್ಪನನ್ನು 'ಯಾವಾಗ ಈ ಶಾಲೆ ಮುಗಿಯುತ್ತದೆ?' ಎಂದು ಕೇಳುತ್ತಿದ್ದೆ. ಆಗ ಅಪ್ಪ "10ನೇ ಕ್ಲಾಸ್ ತನಕ ಮಾತ್ರ. ಕಾಲೇಜಿನಲ್ಲಿ ಈ ಎಲ್ಲ ಗೋಳು ಇರುವುದಿಲ್ಲ. ಮೊದಲು ಚೆನ್ನಾಗಿ ಓದಿ ಎಸ್‌ಎಸ್‌ಎಲ್‌ಸಿ ಓದಿ ಮುಗಿಸು ಎಂದು
ಸಮಾಧಾನಪಡಿಸುತ್ತಿದ್ದರು.
ನಿಜ, ಈಗ ನನಗೆ ಹೋಮ್‌ವರ್ಕ್ ಮಾಡದಿದ್ದರೆ ಯಾರೂ ಬೈಯುವವರಿಲ್ಲ, ಹೊಡೆಯುವವರಿಲ್ಲ. ನೋಟ್ಸ್ ಕೊಡುತ್ತಾರೆ, ಹೋಮ್‌ವರ್ಕ್ ಕೂಡ ಕೊಡುತ್ತಾರೆ. ಬೇಕಾದವರು ಮಾಡಬಹುದು. ಇಲ್ಲದವರು ಇಲ್ಲ. ಮಾಡದಿದ್ದರೆ ಯಾಕೆ ಮಾಡಿಲ್ಲ
ಎಂದೂ ಕೇಳುವುದಿಲ್ಲ. ಫುಲ್ ಫ್ರೀ. ಈ ಸ್ವಾತಂತ್ರ್ಯವನ್ನು ಕಾಲೇಜಿಗೆ ಸೇರಿದ ಆರು ತಿಂಗಳು ಅನುಭವಿಸಿದೆ. ಈಗ ಅದರ ಪರಿಣಾಮ ಕಾಣಿಸುತ್ತಿದೆ. ಪ್ರಿಲ್ಮನರಿ ಪರೀಕ್ಷೆಗಳಲ್ಲಿ ಜಸ್ಟ್ ಪಾಸ್! ಇಷ್ಟು ಕಡಿಮೆ ಮಾರ್ಕ್ಸ್ ಯಾವತ್ತೂ ತೆಗೆದುಕೊಂಡವಳಲ್ಲ. ಅಪ್ಪ-ಅಮ್ಮನಿಗೆ ಏನುಹೇಳಲಿ? ಈಗ ಬಹಳ ಪಶ್ಚಾತ್ತಾಪವಾಗುತ್ತಿದೆ.
ಏನೇನು ಮಾಡಿದೆ ಈ ಆರು ತಿಂಗಳಲ್ಲಿ? ಫ್ರೆಂಡ್ಸ್,ಫಿಲ್ಮ್, ಹೊಟೇಲ್, ಪಿಕ್‌ನಿಕ್...ಇಷ್ಟೂ ನೆನಪಿಗೆ ಬರುತ್ತಿರುವುದು. ಸ್ಟಡಿಗೆ ಅಂತ ಕುಳಿತಿರುವುದು.. ಊಹುಂ, ನೆನಪಿಗೇ ಬರ್ತಾ ಇಲ್ಲ. 30 ಫಿಲ್ಮ್, ಎಂಟು ಹತ್ತು ಟ್ರಿಪ್, ಹೊಟೇಲ್‌ಗಳಿಗೆ ತಿರುಗಿದ್ದಂತೂ ಲೆಕ್ಕವೇ ಇಡಲು ಸಾಧ್ಯವಿಲ್ಲ. ವಾರಕ್ಕೆ ಒಂದು ಸಿನಿಮಾವನ್ನಾದರೂ ನೋಡಲೇ ಬೇಕು. ಒಳ್ಳೆಯದು ಬಂದರೆ ಎರಡು, ಮೂರು.. ಹೀಗೆ.
ಬೇಗನೆ ಕ್ಲಾಸು ಮುಗಿದರೆ ಸರಿ, ಇಲ್ಲದಿದ್ದರೆ ಕ್ಲಾಸ್ ಬಂಕ್. ನನ್ನ ಫ್ರೆಂಡ್ಸ್ ಮನೆಗಳ ಹತ್ತಿರ ಇರುವ ಯಾವ ಒಳ್ಳೆ ಸ್ಪಾಟ್‌ನ್ನೂ ಬಿಟ್ಟಿಲ್ಲ. ಹೊಟೇಲ್‌ಗಳಿಗೆ ಎಷ್ಟು ದುಡ್ಡು ಸುರಿದಿದ್ದೇವೋ.. ಅಪ್ಪ-ಅಮ್ಮ ಅಷ್ಟು ಓದು ಇಷ್ಟು ಓದು ಅಂತ ಯಾವತ್ತೂ ಒತ್ತಾಯ ಮಾಡಿದವರಲ್ಲ. ಈಗ ಕಡಿಮೆ ಮಾರ್ಕ್ಸ್ ಬಂದಿದೆ ಎಂದು ಬೈಯುವವರೂ ಅಲ್ಲ. ಆದರೂ.. ಏನೋ ಒಂಥರಾ.. ನನ್ನ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎನ್ನುವ ಗಿಲ್ಟ್.
ಆ ಟೈಮ್‌ಗೆ ಎಂಜಾಯ್ ಮಾಡಿದ ಖುಷಿ ಎಲ್ಲ ರಿಸಲ್ಟ್ ನೋಡಿದಾಕ್ಷಣ ಬತ್ತಿ ಹೋಗಿದೆ. ಹೀಗಾಗುತ್ತದೆ ಎಂದು ಗೊತ್ತಿದ್ದರೆ ಖಂಡಿತ ಸ್ಟಡಿಸನ್ನೆಲ್ಲ ಇಷ್ಟು ನೆಗ್ಲೆಟ್ ಮಾಡುತ್ತಿರಲಿಲ್ಲ... ಸ್ವಾತಂತ್ರ್ಯ ಎಂದರೆ... ಹೌದು, ಇದೇನೂ ಕೊನೆಯ ಪರೀಕ್ಷೆಯಲ್ಲ. ನಾನು ಮತ್ತೆ ಚೆನ್ನಾಗಿ ಓದಿ ಒಳ್ಳೆಯ ಮಾರ್ಕ್ಸ್ ತೆಗೆದುಕೊಳ್ಳಬಹುದು. ಆದರೆ ನನಗೆ ಕಾಡುತ್ತಿರುವ ಪ್ರಶ್ನೆ ಎಂದರೆ, ಆಗ ಆಶಿಸುತ್ತಿದ್ದ ಸ್ಟಡೀಸ್‌ನಿಂದ ಮುಕ್ತಿಈಗ ದೊರಕಿದೆ.
ಆದರೆ ಅದು ಏಕೆ ಖುಷಿ ಕೊಡುತ್ತಿಲ್ಲ? ಕೊಟ್ಟರೂ ಯಾಕೆ ಕ್ಷಣಿಕ? ಹೇಳುವವರು ಕೇಳುವವರು ಇಲ್ಲ. ಯಾವುದಕ್ಕೂ ಒತ್ತಾಯ ಮಾಡುವವರು ಇಲ್ಲ. ಆದರೂ ಈ ಸ್ವಾತಂತ್ರ್ಯ ಕೊಡುತ್ತಿಲ್ಲ.ಯಾವುದೋ ಒಂದು ಮಿತಿ, ಅಂಕೆ ಬೇಕು ಅನಿಸುತ್ತಿದೆ. ಆಗ ಬೇಸರದಿಂದ ಹೋಮ್‌ವರ್ಕ್ ಮಾಡಿದರೂ ಏನೋ ಒಂಥರ ಸಮಾಧಾನವಿರುತ್ತಿತ್ತು. ಏನೋ ಒಂದು ಮಾಡಿ ಮುಗಿಸಿದ ಖುಷಿ ಇರುತ್ತಿತ್ತು. ಆದರೆನಾನು ಸ್ವಾತಂತ್ರ್ಯವನ್ನು ತಪ್ಪಾಗಿ ಗ್ರಹಿಸಿಕೊಂಡಿದ್ದೆ.
ಇನ್ನು ಮುಂದೆ ನನಗೆ ನಾನೇ ಒಂದು ಮಿತಿಯನ್ನು ಹಾಕಿಕೊಳ್ಳುತ್ತೇನೆ. ಚೆನ್ನಾಗಿ ಸ್ಟಡಿ ಮಾಡುತ್ತೇನೆ. ಅನಗತ್ಯವಾಗಿ ಸುತ್ತುವುದಿಲ್ಲ. ಈ ಸಾರಿ ಮನೆಗೆ ಹೋದಾಗ ಅಪ್ಪನ ಎದುರು ತಪ್ಪೊಪ್ಪಿಗೆ ಮಾಡಿಕೊಳ್ಳುತ್ತೇನೆ. ಆಗಲಾದರೂ ಈ ಗಿಲ್ಟ್‌ನಿಂದ ಮುಕ್ತಿ ದೊರೆಯಬಹುದು.

Saturday, September 4, 2010
ದೊಡ್ಡವರೆಲ್ಲ ಜಾಣರಲ್ಲ. ..
ಅಜ್ಜ ಮೊಮ್ಮಕ್ಕಳ ನಡುವೆ ಸಾಮಾನ್ಯವಾಗಿ ಒಂದು ಮಧುರ ಬಾಂಧವ್ಯವಿರುತ್ತದೆ. ಮೊಮ್ಮಗುವಿನ ತಪ್ಪು ಅಜ್ಜನಿಗೆ ತಪ್ಪಾಗಿ ಕಾಣಿಸದೆ ಬಾಲಲೀಲೆಯಂತೆ ಕಾಣಿಸುತ್ತದೆ. ಮೊಮ್ಮಗುವಿಗಂತೂ ಅಜ್ಜನೇ ಪ್ರಪಂಚ.
ಆದರೆ ಈ ಮಾದಜ್ಜ ಮಾತ್ರ ಸ್ವಲ್ಪ ವಿಚಿತ್ರ. ಶ್ರೀಮಂತ ಒಂಟಿ ಮುದುಕ. ಅವನ ಆರಡಿಯ ಗೌರವ ವರ್ಣದ ದೇಹ ನೋಡಿದರೇ ಭಯ-ಭಕ್ತಿ ಉಂಟಾಗುತ್ತಿತ್ತು. ಯಾರನ್ನೂ ಸುಲಭಕ್ಕೆ ನಂಬುವುದಿಲ್ಲ. ಯಾರನ್ನು ಹಚ್ಚಿಕೊಳ್ಳುತ್ತಲೂ ಇರಲಿಲ್ಲ. ವೇದ-ತರ್ಕ ಅಂತ ಬಹಳ ಓದಿಕೊಂಡಿದ್ದ. ಸಿಕ್ಕಾಪಟ್ಟೆ ಮಡಿ, ತಾಸುಗಟ್ಟಲೆ ದೇವರಪೂಜೆ ಮಾಡುತ್ತಿದ್ದ. ಅವನಿಗೆ ಎದುರು ಹೇಳುವವರೇ ಇಲ್ಲ.
ನಮಗೆ ದೂರದ ಸಂಬಂಧಿ. ಒಂಟಿತನ ಬೇಸರ ತರಿಸಿದಾಗಲೆಲ್ಲ ನಮ್ಮ ಮನೆಗೆ ಬರುತ್ತಾನೆ. ಅವನು ಬಂದ ಎಂದರೆ ಎಲ್ಲರಿಗೂ ತಲೆನೋವು. ಆದರೂ ಪಾಪ ವಯಸ್ಸಾಗಿದೆ. ಹಿಂದೆ ಮುಂದೆ ದಿಕ್ಕಿಲ್ಲದವನು ಎಂದು ಉಪಚರಿಸುತ್ತಿದ್ದರು.
ಅದರಲ್ಲೂ ಮಕ್ಕಳಿಗಂತೂ ಬಹಳ ಕಿರಿಕಿರಿ. ಪ್ರತಿಯೊಂದಕ್ಕೂ ಮಾದಜ್ಜನ ಗೊಣಗಾಟವಿರುತ್ತಿತ್ತು. ಮಕ್ಕಳು ಅವನ ಎದುರು ಹಾದು ಹೋದರೂ ಸಾಕು ಮಾದಜ್ಜನ ಬಾಯಿಗೆ ಅವರು ಬಿದ್ದರು ಅಂತಲೇ ಅರ್ಥ. ಮಾದಜ್ಜ ಬಂದ ಅಂದರೆ ಸಾಕು ನಾವು ಮಕ್ಕಳೆಲ್ಲ ಇಲಿ ತರಹ ಮೂಲೆ ಸೇರಿಕೊಂಡುಬಿಡುತ್ತಿದ್ದೆವು. ಅವನ ಬೈಗುಳಗಳೇ ಹಾಗಿರುತ್ತಿದ್ದವು. ನಮ್ಮ ಆತ್ಮವಿಶ್ವಾಸ, ನಗು ಎಲ್ಲ ಅವನ ಬೈಗುಳದ ಎದುರು ಪುಡಿಪುಡಿ ಆಗಿಬಿಡುತ್ತಿದ್ದವು. ಯಾವ ಕ್ಷಣದಲ್ಲಿ ಮಾದಜ್ಜನ ಬೈಗುಳ ಬಂದು ಎರಗುತ್ತೋ ಅಂತ ಟೆನ್ಷನ್‌ಲೇ ದಿನ ಕಳೆಯುತ್ತಿದ್ದೆವು.
ಒಂದು ಶನಿವಾರ ಮನೆಗೆ ಹೋದಾಗ ಮಾದಜ್ಜನೂ ಬಂದಿದ್ದ. ಅವನನ್ನು ನೋಡಿದಾಕ್ಷಣ ನನ್ನ ಅರ್ಧ ಉತ್ಸಾಹ ಬತ್ತಿಹೋಗಿತ್ತು. ನಾನು ಫ್ರಾಕು ಬಿಟ್ಟು ಚೂಡಿದಾರ ಹಾಕಿ ಕಾಲೇಜಿಗೆ ಹೋಗಲು ಪ್ರಾರಂಭಿಸಿದ ಮೇಲೆ ಇದೇ ಮೊದಲ ಬಾರಿಗೆ ಅವನು ನನ್ನನ್ನು ನೋಡಿದ್ದು. ಮೇಲಿನಿಂದ ಕೆಳಗಿನವರೆಗೆ ಒಮ್ಮೆ ನೋಡಿ, "ಈ ಕಾಲದ ಹೆಣ್ಣುಮಕ್ಕಳೋ, ಅವರ ವೇಷವೋ ಎಂದು ಮೂಗು ಮುರಿದ. ಒಮ್ಮೆಲೇ ಸಿಟ್ಟು ಬಂತು. ಆದರೂ ಅಮ್ಮ ಹೇಳುತ್ತಿದ್ದ 'ಮನುಷ್ಯನ ವ್ಯಕ್ತಿತ್ವಕ್ಕೆ ಗೌರವವಿಲ್ಲದಿದ್ದರೂ ಕೊನೇ ಪಕ್ಷ ಅವನ ವಯಸ್ಸಿಗಾದರೂ ಗೌರವ ನೀಡಬೇಕು' ಎನ್ನುವ ಮಾತು ನೆನಪಾಗಿ ಸುಮ್ಮನಾದೆ.
ಅಡುಗೆ ಮನೆಗೆ ಓಡಿಹೋದವಳೇ ಅಮ್ಮನ ಕುತ್ತಿಗೆಗೆ ಜೋತುಬಿದ್ದು ಕಾಲೇಜಿನ ಕಥೆ ಎಲ್ಲ ಹೇಳುತ್ತ ಜೋರಾಗಿ ನಗುತ್ತಿದ್ದೆ. ಮತ್ತೆ ಮಾದಜ್ಜನ ಪ್ರವೇಶವಾಯಿತು. 'ಈಗಿನ ಕಾಲದ ಮಕ್ಕಳಿಗೆ ಹಿರಿಯರು ಅನ್ನುವ ಗೌರವವೇ ಇಲ್ಲ. ನಾವೆಲ್ಲ ಅಪ್ಪ ಅಮ್ಮರಿಂದ ಮಾರು ದೂರ ನಿಂತುಮಾತನಾಡುತ್ತಿದ್ದೆವು' ಎಂದು ಗೊಣಗಿದ. ಇವತ್ತು ಸುಮ್ಮನಿರಲು ಸಾಧ್ಯವೇ ಇಲ್ಲ ಎನ್ನುವಷ್ಟು ಕೋಪ ಬಂತು. ಅಮ್ಮನ ಕಣ್ಸನ್ನೆ ನೋಡಿ ನನ್ನ ಪಾಡಿಗೆ ನಾನು ಹೋದೆ.
ಚಿಕ್ಕಂದಿನಿಂದಲೂ ಅಣ್ಣನ ಅಂಗಿ-ಪ್ಯಾಂಟು ಅಂದರೆ ನನಗಿಷ್ಟ. ಅದನ್ನು ಮನೆಯಲ್ಲಷ್ಟೇ ಹಾಕುತ್ತಿದ್ದೆ. ಅದಕ್ಕೆ ಯಾರ ತಕರಾರೂ ಇರಲಿಲ್ಲ. ಮಾದಜ್ಜ ನೋಡಿದವನೇ 'ನಿನ್ನಲ್ಲಿ ಒಂದೂ ಹುಡುಗಿಯರ ಲಕ್ಷಣವೇ ಇಲ್ಲ ಎಂದು ಜರೆದ. ಮಾದಜ್ಜನ ಮಾತು ನನ್ನಲ್ಲಿದ್ದ ಸ್ವಾಭಿಮಾನ, ಸ್ತ್ರೀತ್ವ ಕೆಣಕಿದಂತಾಯಿತು.
ಎಲ್ಲಿತ್ತೋ ಧೈರ್ಯ ಗೊತ್ತಿಲ್ಲ. 'ಮಾದಜ್ಜ, ಸ್ತ್ರೀತ್ವವನ್ನು ಅಳೆಯುವ ಮಾಪಕ ಯಾವುದು? ನಿನ್ನ ಪ್ರಕಾರ ಯಾವ ಲಕ್ಷಣ ಇದ್ದರೆ ಅವಳು ಸ್ತ್ರೀ ಆಗುತ್ತಾಳೆ? ಎಂದು ಸ್ವಲ್ಪ ಜೋರಾಗಿ ಕೇಳಿದ್ದೆ. ಮಾದಜ್ಜ ನನ್ನ ಅನಿರೀಕ್ಷಿತ ಪ್ರಶ್ನೆಯಿಂದ ಕಂಗಾಲಾಗಿಬಿಟ್ಟಿದ್ದ. ಉತ್ತರಕ್ಕಾಗಿ ಮಾದಜ್ಜ ತಡವರಿಸುತ್ತಿದ್ದಾಗಲೆ ನಾನು ಮುಂದುವರಿಸಿದೆ.
'ತಲೆ ಬಗ್ಗಿಸಿಕೊಂಡು, ಗಟ್ಟಿಯಾಗಿ ಮಾತನಾಡದೆ, ಜೋರಾಗಿ ನಗದೆ ಇದ್ದುಬಿಡುವುದೇ ಹುಡುಗಿಯರ ಲಕ್ಷಣವಾ? ಒಬ್ಬಳು ಹೂವು ಮುಡಿದುಕೊಂಡು, ದೊಡ್ಡ ಕುಂಕುಮ ಇಟ್ಟು ಕೈತುಂಬ ಬಳೆ ತೊಟ್ಟುಕೊಂಡು ಮನದ ತುಂಬ ಹುಳುಕು ತುಂಬಿಕೊಂಡರೆ ಅವಳು ನನ್ನ ಪ್ರಕಾರ ಸ್ತ್ರೀಯೇ ಅಲ್ಲ! ಸಹನೆ, ಆದರಾತಿಥ್ಯ, ಬೇರೆಯವರ ಕಷ್ಟಕ್ಕೆ ಸ್ಪಂದಿಸುವುದು, ಎಲ್ಲರನ್ನೂ ಸಮಾನವಾಗಿ ನೋಡುವುದು ಇವೆಲ್ಲ ಸ್ತ್ರೀ ಆದವಳಲ್ಲಿ ಇರಬೇಕಾದದ್ದು. ಅದು ನನ್ನಲ್ಲಿದೆ!! ಎಂದು ಆವೇಶದಿಂದ ಕೂಗಿದ್ದೆ.
ಮಾದಜ್ಜ ಮರು ಮಾತಾಡಲಿಲ್ಲ. ಅಪ್ಪ ಅಮ್ಮ ನನ್ನ ಕೂಗಾಟ ಕೇಳಿ ಓಡಿಬಂದಿದ್ದರು. ಅಮ್ಮ ನನಗೆ ಬೈದು ಮಾದಜ್ಜನ ಕ್ಷಮೆ ಕೇಳಲು ಹೇಳಿದಳು. ನಾನು ಒಲ್ಲದ ಮನಸ್ಸಿನಿಂದ ತಪ್ಪಾಯ್ತು ಅಂತಲೂ ಹೇಳಿದ್ದೆ. ಇವತ್ತು ಮಾದಜ್ಜ ಬಂದಿದ್ದ. ಸರಿಯಾಗೇ ಮಾತನಾಡಿಸಿದೆ. ಆದರೆ ಮುಖ ತಿರುಗಿಸಿಕೊಂಡ. ಅವನನ್ನು ಬದಲಾಯಿಸುವ ಅಗತ್ಯ ನನಗಿಲ್ಲ. ಅದು ಸಾಧ್ಯವೂ ಇಲ್ಲ. ವಯಸ್ಸು ಹೆಚ್ಚಿದರೆ, ದೊಡ್ಡ ದೊಡ್ಡ ಗ್ರಂಥ ಪಠಿಸಿದ ಮಾತ್ರಕ್ಕೆ ಮನಸ್ಸು ಬೆಳೆಯದು.

Subscribe to:
Comments (Atom)