Saturday, April 9, 2011

ಸ್ವಂತಿಕೆಯೂ, ಡಿಪೆಂಡೆನ್ಸಿಯೂ..

ಸಂಬಂಧಗಳು ಅಂದರೆ ಹೀಗೆ... ಒಂದು ರೀತಿಯಲ್ಲಿ ಬಗೆಹರಿಯದ ಗೊಂದಲಗಳು. ಯಾವ ಸಂಬಂಧಗಳನ್ನು ಹೇಗೆ ನೋಡಬೇಕೋ, ಯಾರ ಜೊತೆ ಹೇಗೆ ಇರಬೇಕೋ, ಅದನ್ನು ಹೇಗೆ ನಿಭಾಯಿಸಬೇಕೋ... ಎಲ್ಲ ಬರಿ ಗೋಜಲು...ಗೋಜಲು.

ಭಾರತೀಯ ಗೆಳೆತನದ ನಂತರ ಮಾನವ ಸಂಬಂಧಗಳು, ಅದರೊಳಗೆ ಆಧಾರಪಡುವುದು, ಪ್ರೀತಿ, ಅಗತ್ಯ... ಹೀಗೆ ಮೊದಲಾದವುಗಳ ಬಗ್ಗೆ ವಿಪರೀತ ಸೀರಿಯಸ್ಸಾಗಿ ವಿಚಾರ ಮಾಡಲೇಬೇಕಾಗಿ ಬಂದಿದೆ.

ಯಾರಾದರೂ ನನ್ನ ಮೇಲೆ ಮಾನಸಿಕವಾಗಿ ಡಿಪೆಂಡ್ ಆದರೆ ಭಾರವೆನಿಸುತ್ತದೆ. ಅದೇ ರೀತಿ ನಾನೂ ಕೂಡಾ ಯಾರಿಗಾದರೂ ಭಾರ ಎನಿಸಿರಬಹುದಲ್ಲ! ನಾನೂ ಸಂಪೂರ್ಣವಾಗಿ ಭಾವನಾತ್ಮಕವಾಗಿ ಸ್ವತಂತ್ರಳಾದರೆ? ಯಾವುದಕ್ಕೂ

ಯಾರನ್ನೂ ಅವಲಂಬಿಸದಿದ್ದರೆ...? ಹೀಗೆ ಬಹಳ ದಿನಗಳಿಂದ ಅಂದುಕೊಂಡಿದ್ದೆ. ಆದರೆ ಇದು ತಪ್ಪು ಎಂದು ಬೇಗನೇ ತಿಳಿಯಿತು.

ನನಗೆ ತಿಳುವಳಿಕೆ ಬಂದಾಗಿನಿಂದಲೂ ಅಮ್ಮನೇ ತಲೆ ಸ್ನಾನ ಮಾಡಿಸುತ್ತಿದ್ದಿದ್ದು, ದಿನಾ ಕೂದಲು ಬಾಚುವುದೂ ಅವಳದೇ ಕೆಲಸ. ಇವರೆಡು ಕೆಲಸಗಳನ್ನು ಅವಳೇ ಮಾಡಿಕೊಡಬೇಕಿತ್ತು. ಇನ್ಯಾರು ಮಾಡಿದ್ರೂ ಸರಿಯೇ ಆಗುತ್ತಿರಲಿಲ್ಲ. ಇದೇ

ಕಾರಣದಿಂದ ಅಮ್ಮನ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಯಾವ ಸಂಬಂಧಿಕರ ಮನೆಯಲ್ಲೂ ಉಳಿಯುತ್ತಿರಲಿಲ್ಲ. ಉಳಿದರೂ 2 ದಿನಗಳಲ್ಲೇ ವಾಪಸ್.

ನನ್ನ ಈ ಸ್ವಭಾವದಿಂದ ಅಮ್ಮನೋ ಬೇಸತ್ತು ಹೋಗಿದ್ದಳು. "ನೀನಂತೂ ಯಾವಾಗ ನಿನ್ನ ಕೆಲಸಗಳನ್ನು ಮಾಡಿಕೊಳ್ಳಲು ಕಲಿಯುತ್ತಿಯೋ... ಮದುವೆಯಾಗಿ ಗಂಡನ ಮನೆ ಸೇರಬೇಕಾದವಳು. ಅಲ್ಲಿ ಹೇಗೆ ನಿಭಾಯಿಸುತ್ತಿಯೋ... ನಿನ್ನ

ಅಮ್ಮ ನಿನಗೆ ಕಲಿಸಿದ್ದೇ ಇದನ್ನ ಎಂದು ಕೇಳುವ ಹಾಗೆ ಮಾಡುತ್ತಿಯೋ ಏನೋ ಅಂತ ಗೊಣಗುತ್ತಲೇ ತಲೆ ಸ್ನಾನ ಮಾಡಿಸುತ್ತಿದ್ದಳು. ಇದು ಪ್ರತಿ ವಾರದ ಗೊಣಗಾಟವಾದ್ದರಿಂದ ಆ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಆಗೆಲ್ಲ

ಇನ್ನು ಮುಂದೆ ನಾನೇ ತಲೆಸ್ನಾನ ಮಾಡಿಕೊಳ್ಳಬೇಕು. ಅಮ್ಮನ ಮೇಲೆ ಡಿಪೆಂಡ್ ಆಗಲೇಬಾರದು ಎನಿಸುತ್ತಿತ್ತು. ಆದರೆ ಅಮ್ಮನ ಕೈಯಿಂದ ಸ್ನಾನ ಮಾಡಿಸಿಕೊಳ್ಳುವ ಆನಂದ ಕಳೆದುಕೊಳ್ಳಲು ಸಿದ್ಧಳಿರಲಿಲ್ಲ.

ಈಗ ಕಾಲೇಜಿಗೆ ಸೇರಿದ ಮೇಲೆ ಆ ಅವಕಾಶ ತಪ್ಪಿ ಹೋಗಿತ್ತು. ಹಾಸ್ಟೆಲಿನಲ್ಲಿ ನಾನೇ ತಲೆಸ್ನಾನ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಇವತ್ತು ಮನೆಗೆ ಬಂದಾಗ ಇನ್ನು ಅಮ್ಮನಿಂದ ಬೈಸಿಕೊಳ್ಳುವುದೇಕೆಂದು ನಾನೇ ತಲೆಸ್ನಾನ

ಮಾಡಿಕೊಂಡೆ. ಬಾತ್ ರೂಮಿನ ಬಾಗಿಲು ತೆರೆದಾಗ ಎದುರಿಗೆ ಅಮ್ಮ ನಿಂತಿದ್ದಳು. ಅವಳ ಕಣ್ಣತುಂಬ ನೀರಿತ್ತು!!

ಒಂದು ತರಹದ ಅಸಮಾಧಾನದಲ್ಲಿ "ನೀನೆ ಸ್ನಾನ ಮಾಡಿಕೊಂಡ್ಯಾ ಅಂತ ಕೇಳಿದಳು. ನನಗೆ ಒಂದು ಸಲ ಗಲಿಬಿಲಿ. ನಾನು ಏನು ಮಾಡಿದೆ ಎಂದು ಅಮ್ಮ ಈ ಪ್ರಶ್ನೆ ಕೇಳುತ್ತಿದ್ದಾಳೆ? ಕಣ್ಣೀರು ಹಾಕುವಂತಹದ್ದು ಆಗಿದ್ದಾದರೂ ಏನು?

"ಮೊದಲೆಲ್ಲ ನಾನು ಇಲ್ಲದೆ ತಲೆ ಸ್ನಾನ ಮಾಡಿದವಳೇ ಅಲ್ಲ. ನಾನು ಬರುವವರೆಗೂ ಅಮ್ಮ ಬಾರೆ, ಸ್ನಾನ ಮಾಡಿಸೆ ಎಂದು ಕರೆಯುತ್ತಿದ್ದೆ. ಈಗ ಎಲ್ಲ ದೊಡ್ಡವರಾಗಿಬಿಟ್ಟೀದ್ದೀರಲ್ಲ. ರೆಕ್ಕೆ ಬಲಿತಿದೆ. ಹಾರಿಹೋಗಲು ಇನ್ನೇನು? ಇನ್ನು ಮುಂದೆ

ಅಮ್ಮನೂ ಬೇಡ. ಅಪ್ಪನೂ ಬೇಡ. ಎಲ್ಲ ನೀವೇ ಮಾಡಿಕೊಳ್ಳಿ ಎನ್ನುತ್ತಾ ಕಣ್ಣೀರಾದಳು.

ಅಮ್ಮನ ದುಃಖಕ್ಕೆ ಅರ್ಥ ಕಂಡಿತ್ತು. ಮಾನವ ಸಂಬಂಧಗಳಲ್ಲಿ ಕನಿಷ್ಠ ಮಟ್ಟದ ಡಿಪೆಂಡೆನ್ಸಿ ಬೇಕೇಬೇಕು. ಇಲ್ಲವೆಂದರೆ ನಮ್ಮನ್ನು ಪ್ರೀತಿಸುವಾರಿಗೆ ಇನ್ ಸೆಕ್ಯುರಿಟಿ ಕಾಡುವಂತೆ ಮಾಡಿಬಿಡುತ್ತೇವೆ.-ಸುಮಿ

7 comments:

ಭಾವನೆಗಳಿಗೆ ಜೀವ ತುಂಬುತ್ತ... said...

sambandhagaLu yavattidru murodu hogalla... good writing... tumba feel aytu.. ammana nenapu...

ಭಾವನೆಗಳಿಗೆ ಜೀವ ತುಂಬುತ್ತ... said...

sambandhagaLa bele gottagodu aa sambandhagaLu kai tappi hodaga matra..Good writing.. ammana nenapu tumba kadtide..

Rashmi Abhaya Simha said...

ಮಕ್ಕಳು ಇಂಡಿಪೆಂಡೆಂಟ್ ಆಗೋದನ್ನ ಹೆತ್ತವರು ಯಾವ ರೀತಿ ಪರ್ಸೀವ್ ಮಾಡ್ಬಹುದು ಅಂತ ಎಷ್ಟೋ ಬಾರಿ ಯೋಚ್ನೆ ಮಾಡ್ತೀನಿ ಸುಮ. ಕಷ್ಟ. ಈ ಬೇರ್ಪಡುವಿಕೆನ ಒಪ್ಕೊಳ್ಳೋದು ಕಷ್ಟ. ಇಲ್ಲಿ ಪ್ರತಿಯೊಬ್ಬರೂ ಸ್ವತಂತ್ರ ಜೀವಿಗಳು ಅಂತ ನಾನು ಹೇಳ್ಬಹುದು. ಆದ್ರೆ ನೀನು ಮಾತಾಡ್ತಾ ಇರೋ "ದಿಪೆಂಡೆನ್ಸಿ" ಯನ್ನು ಕಳಚಿ ಬದುಕೋದು ಮ್... ಯಾಕೋ ಡೌಟ್ ! ಸ್ಪಂದನೆ-ಪ್ರತಿಸ್ಪಂದನೆ ಇದೇ ಬದುಕು ಅಲ್ವಾ..

ರಶ್ಮಿ.

ಕನಸು ಕಂಗಳ ಹುಡುಗ said...

ಮಾನವ ಸಂಬಂಧಗಳೇ ಹಾಗೆ.....
ಕೆಲವೊಂದನ್ನು ಹೇಳಿಕೊಂಡ ಹೊರತು ಗೊತ್ತೇ ಆಗುವುದಿಲ್ಲ....
ಹೇಗೆ ನಿಭಾಯಿಸಬೇಕು ಅನ್ನೋದಕ್ಕಿಂತ ಅದು ಹಾಗಿದ್ದರೇನೇ ಚಂದ ಅಂತ... ರೂಢಿಗಳು ಬದಲಾದಾಗ ಅನ್ನಿಸತೊಡಗುತ್ತವೆ....

ಎಲ್ಲರ ಅನುಭವಕ್ಕೂ ಇಂತವುಗಳು ಬಂದೇ ಬರುತ್ತವೆ...
ಒಳ್ಳೆಯ ಲೇಖನ...

gourish.blogspot.com said...

navu kushi inda irabekadare adakke halavaru janara preeti beke beku ade depend. yaramelu depend agade badukuttevendare adu preeti ilde baduko huchu kalpane... nimm baraha bahala hidisitu... thanks

gourish.blogspot.com said...

navu kushi inda irbeku andre adakke halavara preeti karanavagiruttade, yaramelu depend agade badukuttevendare adu sadyavilla... jeevanadalli kottu tagolo preetie e depend alva... nimma baraha tumba hidisitu... thanks...

naanu Nandini said...

relationships, especially mother n daughter's relationship is difficult to explain n describe but lovely to experience the love of each other... i think every daughter comes across with such experience... nice lines by you dear